Current Date 22 Sep, 2026

ದುನಿಯಾ ವಿಜಯ್ ಅಭಿನಯದ ಲ್ಯಾಂಡ್‌ಲಾರ್ಡ್‌ ಸಿನಿಮಾ ಸ್ಪೆಷಲ್ ವಿಡಿಯೋ

ಸಾರಥಿ ಫಿಲಂಸ್ ಸಂಸ್ಥೆಯಿಂದ ಕೆ ವಿ ಸತ್ಯಪ್ರಕಾಶ್ ಹಾಗು ಹೇಮಂತ್ ಗೌಡ ಕೆ ಎಸ್ ನಿರ್ಮಾಣದ, ಜಡೇಶ್ ಕೆ ಹಂಪಿ ನಿರ್ದೇಶನದ, ದುನಿಯಾ ವಿಜಯ್ (Duniya Vijay) ಅಭಿನಯದ ಲ್ಯಾಂಡ್‌ಲಾರ್ಡ್ ಚಿತ್ರದ (Landlord Movie) ಹೊಸ ಮಾಹಿತಿ ಹೊರ ಬಂದಿದೆ. ವರಮಹಾಲಕ್ಷ್ಮಿಹಬ್ಬದ ದಿನವೇ ಒಂದು ಸುದ್ದಿ ಹೊರ ಬಂದಿದೆ. ವಿಡಿಯೋ ಕೂಡ ಹೊರ ಬಂದಿದೆ. ಆದರೆ, ಈ ಒಂದು ಸುದ್ದಿ ಚಿತ್ರದ ಸಂಗೀತಕ್ಕೆ ಸಂಬಂಧಿಸಿದ್ದೇ ಆಗಿದೆ. ಭೀಮ, ಜಂಟಲ್‌ಮ್ಯಾನ್, ಗುರುಶಿಷ್ಯರು ಹೀಗೆ ಸಾಲು ಸಾಲು ಒಳ್ಳೆ ಸಂಗೀತ ಹಾಡುಗಳನ್ನೆ ಕೊಟ್ಟ ದುನಿಯಾ ವಿಜಯ್, (Duniya Vijay) ಜಡೇಶ್ ಹಂಪಿ (Jadesh Hampi) ಹಾಗೂ ಬಿ.ಅಜನಿಶ್ ಲೋಕನಾಥ್ ಅವರು ಇದೀಗ ಮತ್ತೊಮ್ಮೆ ಅಂತಹದ್ದೆ ಒಂದು ಕಮಾಲ್ ಮಾಡಿದ್ದಾರೆ. ಅದು ಲ್ಯಾಂಡಲ್‌ಲಾರ್ಡ್ ಚಿತ್ರವೇ ಆಗಿದೆ. ಅದನ್ನೆ ಇದೀಗ ಸಿನಿಮಾ ತಂಡ ಹೇಳಿಕೊಂಡಿದೆ ಹಾಗು ಹಾಡುಗಳನ್ನು ವಿತರಿಸುವ ಹಕ್ಕನ್ನು ಕರ್ನಾಟಕದ ಹೆಸರಾಂತ ಆಡಿಯೋ ಸಂಸ್ಥ್ಯೆಯಾದ ಆನಂದ್ ಆಡಿಯೋಗೆ ಸೇರಿದೆ.